ಆಗುಂಬೆ ಘಾಟಿಯ ಮಡಿಲಿನಲ್ಲಿ…

-

Agumbe Sunset

ಹೊರಗಿನಿಂದ ಥಂಡಿ ಗಾಳಿ ಸುಯ್ಯಂದು ಬೀಸುತ್ತಿತು. ಹಸಿರು ಬೆಟ್ಟಗಳ ಮೇಲೆ ತುಂಟ ಮೋಡಗಳು ತೆಳುವಾದ ಬಿಳಿ ದುಪ್ಪಟ್ಟ ಹಾಸಿ ವಯ್ಯಾರ ಮಾಡುತ್ತಿದ್ದವು.ತುಂತುರು ಮಳೆಗೆ ಮೈಯೊಡ್ಡಿ ನಿಂತ ನಗ್ನ ಗಿಡ,ಮರಗಳನ್ನೇ ನುಂಗುವಂತೆ ನೋಡುತ್ತಾ ಕೂತಿದ್ದ ಕವಿಮಿತ್ರ ಶಿಜು ಮಾತ್ರ ಸರ್ಪದಂತೆ `ಬುಸ್’ ಎಂದು ಸಿಗರೇಟಿನ ಹೊಗೆ ಬಿಡುತ್ತಲೇ ಕೂತಿದ್ದ.

ಕಾರಿನಿಂದ ಧಡ-ಬಢ ಇಳಿದು ಸುತ್ತಾ-ಮುತ್ತ ಕಣ್ಣಾಯಿಸಿ ನೋಡಿದ ಎಲ್ಲರೂ, ಒಂದು ಸಲ`ವಾವ್!’ ಎಂದು ಉದ್ಗಾರ ಎಳೆದರು. ಸುಂದರ ಹಸಿರು ಪರ್ವತ ಶ್ರೇಣಿಗಳ ನಡುವೆ ಕಣ್ಣಿಗೆ ಹಬ್ಬತಂದಂತಿತ್ತು ಆಗುಂಬೆ. `ಹಸಿರು ಕಾನನದ ಜಡೆಗೊಂದು ದುಂಡು ಮಲ್ಲಿಗೆ ದಂಡೆ ಅಂಟಿಸಿದಂತೆ. ಎ0ದು ಒಬ್ಬರೇ ಗೊಣಗಿಕೊಂಡು, ತಕ್ಷಣ ಹಾಗೇ ಗೀಜಿಕೊಂಡರು ಮತ್ತೋರ್ವ ಕವಿ ನೂರ್. ಇದನ್ನು ವ್ಯಂಗ್ಯ ಕಣ್ಣುಗಳಲ್ಲಿ ಗಮನಿಸಿದ ರಂಗರಾಜನನ್ನ ಕಡೆ ತಿರುಗಿ ನೋಡಿ.`ಥೂ..ಈ ಹಾಳ್ ಕವಿಗಳನ್ನೆಲ್ಲ ಯಾಕ್ರೀ ಕಕರ್ೊಂಡು ಬರ್ತೀರಿ,’ಎ0ದು ಪರಿಹಾಸ್ಯ ಮಾಡಿದ.”’

ಮೊಟ್ಟ ಮೊದಲಿಗೆ ಚಳಿಗೆ ಅವಿತು ಕುಳಿತುಕೊಂಡಿದ್ದ ಆಗುಂಬೆಯ ಸಾಲುಸಾಲು ಮನೆಗಳು ಕಣ್ಣಿಗೆ ಬಿದ್ದವು.ಮಳೆಗಾಲ ಎದುರಿಸಲು ಕಂಬಳಿಯಂಥ ತಡಿಕೆಹೊದ್ದು, ಮುಖವೇ ತೋರಿಸದೆ ನಾಚಿಕೆಯಿಂದ ನಿಂತಿದ್ದ ಅವುಗಳ ವೈಖರಿಯೇ ಒ0ದು ವಿಸ್ಮಯ.

`ಊರು ಸುತ್ತಿ ನೋಡೋಣವೇ’?ಎಂಬ ನನ್ನ ಮೊದಲ ಮಾತಿಗೇ ಕತ್ತುಮುರಿದ ಯೋಗ `ಅದೆಲ್ಲಾ ಆಮೇಲೆ, ಮೊದ್ಲು ನನ್ನ ಸನ್ ಸೆಟ್ ಪಾಯಿಂಟ್ ನೋಡೋಣ ನಡೀರಿ’ಎಂದ. ಆಕಸ್ಮಿಕ ಸಿನಿಮಾದಲ್ಲಿ ಆಗುಂಬೆಯ ಘಾಟಿ ನೋಡಿ ಸಂಭ್ರಮಪಟ್ಟಿದ್ದ ಅವನಿಗೆ ಅದೇ ಮೊದಲಾಗಬೇಕಿತ್ತು. ಮೇಲಾಗಿ ಅವನು `ಅಣ್ಣಾವ್ರ’ ಕಟ್ಟಾ ಅಭಿಮಾನಿ ಬೇರೆ.ನಾವು ಒ0ದು ಚೂರು ಉಸಿರು ಬಿಚ್ಚದೆ ಸರಿ ಆಯ್ತೆಂದು ಒಪ್ಪಿಕೊಂಡು ಅಲ್ಲಿಂದ ಹೊರಟೆವು. ಕೆಲವೇ ನಿಮಿಷಗಳಲ್ಲಿ ಘಾಟಿಯ ತುತ್ತ ತುದಿ ಬಂದೇ ಬಿಟ್ಟಿತು

ಅಲ್ಲೇ ಒಂದೆಡೆ ಪಕ್ಕಕ್ಕೆ ಡ್ರೈವರ್ ಕಾರು ನಿಲ್ಲಿಸಿದ. ನಿಶ್ಯಬ್ಧವೂ, ಆಹ್ಲಾದಕರವೂ, ಆಗಿದ್ದ ಘಾಟಿಯಲ್ಲಿನಿಸರ್ಗದ ಸುಖ ಅನುಭವಿಸುತ್ತಾ; ಎಲ್ಲರೂ ದೀರ್ಘ ಉಸಿರೆಳೆಯುತ್ತಾ,ಮೌನವಾಗಿ ನಿಂತೆವು.ದೂರದ ಅರಬ್ಬಿ ಸಮುದ್ರ ಅಸ್ಪಷ್ಟವಾಗಿ ಬಿಳಿ ಗೆರೆ ಎಳೆದಂತೆ ಕಾಣಿಸುತ್ತಿತು. ಅಪ್ಪಟ ಮಳೆಗಾಲದ ಸಮಯವಾದರೂ, ಮಳೆಯ ಒಂದು ಸಣ್ಣ ಸುದ್ದಿಯೂ, ಬೇಡವೇ.?

ಸಮುದ್ರದ ಕಡೆಯಿ0ದ ಒಂದಿಷ್ಟು ಮುನಿಸಿಕೊಂಡು ಬರುತ್ತಿದ್ದ,ಅಬ್ಬೇಪಾರಿ ಮೋಡಗಳು ಮಾತ್ರ ಹೊಗೆಯಂತೆ ಬಂದು ಘಾಟಿಗೆ ಬಡಿಯುತ್ತಿದ್ದವು.ಅತ್ತ ಆ ಸೂರ್ಯನ ಸುಳಿವಂತೂ ಇರಲೇ ಇಲ್ಲ. ಕಡೇ ಪಕ್ಷ ಇತ್ತ ಸೂಯರ್ಾಸ್ತವನ್ನಾದರೂ, ನೋಡಬಹುದಾ? ಎಂಬ ಗುಮಾನಿ ಆಸೆಯೊಂದಿಗೆ ಹಗುರವಾದ ಹೆಜ್ಜೆಯಿಡುತ್ತಾ ಘಾಟಿ ಕೆಳಗೆ ಹೊರಟೆವು.

ಅಲ್ಲೇ, ಸ್ವಲ್ಪ ದೂರದಲ್ಲೇ, ಆಗುಂಬೆಯ ಜಗತ್ಪ್ರಸಿದ್ಥ ಸೂಯರ್ಾಸ್ತಮಾನ ವೀಕ್ಷಣೆಗೆಂದು ಒಂದು ಕಾಂಕ್ರೀಟ್ ಅಟ್ಟಣಿಗೆ ನಿಮರ್ಾಣವಾಗಿದೆ. ಘಟ್ಟದ ಆ ಅಟ್ಟಣಿಗೆ ತನಕವೇನೋ ನಾವೆಲ್ಲಸುಖವಾಗಿ ಬಂದೆವು. ನಮ್ಮ ಉದ್ದೇಶ ಇಡೀ ಘಾಟಿಯನ್ನು ಹಾಗೇ ಕಾಲ್ನಡಿಗೆಯಲ್ಲಿ ಇಳಿದು ಪೂರೈಸಿ, ತುಂಬಿ ಹರಿಯುವ ಸೀತಾನದಿಯ ಬಳಿಗೆ ಹೋಗುವುದಾಗಿತ್ತು.ಅಲ್ಲಿ ತುಂತುರು ಮಳೆ ಘಾಟಿಯಿಡೀ ಜಿನುಗುವಾಗ; ಕಳ್ಳನಂತೆ ಮೂಡುತ್ತಾನೆ ಆ ಸೋ0ಬೇರಿ ಸೂರ್ಯ. ತನ್ನ ಬಂಗಾರದ ಕಿರಣಗಳ ಟೀ ಅಂಗಡಿ ತೆರೆದು ಚೌಕಾಶಿ ಲೆಕ್ಕದಲ್ಲಿ ಹಸಿರುಬೆಟ್ಟ, ಬಿಳಿಮ0ಜಿನ ಮೋಡಗಳನ್ನು ರಂಗಿನಿಂದ ಸಿಂಗರಿಸುತ್ತಾನೆ. ಆ ಸೊಬಗನ್ನು ಅನುಭವಿಸುತ್ತಾ, ಘಟ್ಟದ ಒಂದೊಂದು ಮೂಲೆಯಲ್ಲೂ, ಚಿಗಿಯುವ ಪುಟಾಣಿ ಜಲಪಾತಗಳನ್ನು ಕ್ಯಾಮಾರದಲ್ಲಿ ಸೆರೆಹಿಡಿದಿಡುವ ಪ್ಲಾನು ನಮ್ಮದಾಗಿತ್ತು. ಆದರೆ ಅಷ್ಟರಲ್ಲೇ, ಅನಿರೀಕ್ಷಿತವಾಗಿ ನಾವು ಅಲ್ಲಿ ಕಂಡ ಕೆಲ ಯಡವಟ್ಟು ಸಂಗತಿಗಳು ಮನಸಿಗೆ ಕಿರಿಕಿರಿ ತಂದು ಅಲ್ಲೇ ನಮ್ಮ ತಡವಿಕೊಂಡವು. ನಾವೂ ಸಮಾಜ ಸುಧಾರಕರಂತೆ ಹಠ ಹಿಡಿದು ಅಲ್ಲೇ ನಿಂತೆವು.

ಅಲ್ಲೇ ನಮ್ಮ ಕೆಲ ನಾಗರಿಕ ಸಮಾಜದ ಜನರ ವಿಕೃತಿಗಳು ಎದ್ದು ಕಾಣತೊಡಗಿದವು. ಅಲ್ಲೀ ತನಕ ಆಗುಂಬೆಯ ಗಿಡ-ಮರ-ಹೂವು-ಹಕ್ಕಿ-ಬಳ್ಳಿ-ಗಾಳಿ-ಆಕಾಶ.. ಅ0ತ ಏನೇನೋ ಪುಕ್ಕಟ್ಟೆ ಕವಿಗಳಥರ ಲೋಡುಗಟ್ಟಲೆ ರೀಲು ಸುತ್ತುತ್ತಾ, ನವೋದಯ ಶೈಲಿಯಲ್ಲಿ ಹಾಯಾಗಿ ನಡೆದು ಬರುತ್ತಿದ್ದ ನಮ್ಮ ಕಾವ್ಯಲಹರಿಗೆ ಒಮ್ಮೆಲೇ ರಸಾನುಭಂಗವಾಯಿತು.!

ಕೇವಲ ಅದಷ್ಟು ಜಾಗದಲ್ಲಿ ಮಾತ್ರ ನಾವು ಕಂಡ ಆಗುಂಬೆಯ ಪ್ರಕೃತಿ ಚಿತ್ರಣದ ರ
ೀತಿಯೇ ಒದಿಂಷ್ಟು ಬಿಗಾಡಾಯಿಸಿತ್ತು. ತಕ್ಷಣ ಮೂಗಿಗೆ ಬಡಿಯತೊಡಗಿದ ಕಮಟು ವಾಸನೆ, ಪಡ್ಡೆ ಹುಡುಗರ ಅಸಾಧ್ಯ ಕಿರುಚಾಟ, ಅವರ ಅಸಭ್ಯ ಕುಣಿದಾಟಗಳು. ಒಡೆದು ಪುಡಿ ಮಾಡಿ ಬಿಸಾಡಿದ ಬೀರು ಬಾಟಲಿಯ ಚೂರುಗಳು, ರಾಶಿರಾಶಿ ಹಾನಿಕಾರಿ ಪ್ಲಾಸ್ಟೀಕ್ ಥೈಲಿಗಳ ಕ0ತೆಗಳು, ಝರಿಗಳು ಸಣ್ಣಗೆ ಗಿಡ ಮರಗಳ ನಡುವಿನಿಂದ ಧುಮುಕುವ ಜಾಗಗಳಲ್ಲೂ ಬಿಡದೆ ತಿಂದೆಸೆದ ಐಸ್ ಕ್ರೀಮ್ನ ಖಾಲಿ ಡಬ್ಬಿಗಳು, ಒಂದೆರಡಲ್ಲ….ಅಬ್ಬಬ್ಬಾ! ಮನುಷ್ಯ ಮಾತ್ರದ ಅಸೂಕ್ಷ್ಮ ಜೀವಿಮಾತ್ರ ಇಂಥ ಸುಂದರ ಪರಿಸರವನ್ನೂ ದಿಕ್ಕು-ದೆಸೆಯಿಲ್ಲದೆ ಹದಗೆಡಿಸಬಲ್ಲ. ಅಂಥ ಸ್ವಚ್ಛ-ನಿರ್ಮಲ ಜಾಗವನ್ನೂ ಬಿಟ್ಟೂ ಬಿಡದೆ ಜನ ಹಠಬಿದ್ದು ಗಬ್ಬೆಬ್ಬಿಸಿರುವ ರೀತಿ ನೋಡಿ ನಮ್ಮೆಲ್ಲರಿಗೂ ಒ0ದೇ,ಸಲಕ್ಕೆ ತೀರಾ ಪಿಚ್ ಎನಿಸಿತು.

ಅಲ್ಲದೆ, ಆ ಕಿರಿದಾದ ರಸ್ತೆಯ ಬಳಿಯೇ ಇಕ್ಕಟ್ಟಾದ ಅಟ್ಟಣಿಗೆಯ ಬಳಿ ಅಡ್ಡಲಾಗಿ ಒಂದು ಐಸ್ ಕ್ರೀಮ್ ಮಾರುವ ಖಾಸಗಿವಾಹನ ಬೇರೆ ನಿಂತಿತ್ತು. ಜೊತೆಗೆ ಆತ ತನ್ನ ಅನುಕೂಲಕ್ಕಾಗಿ ಒಂದು ಜನರೇಟರ್ ಕೂಡ ಚಾಲೂ ಮಾಡಿಟ್ಟುಕೊಂಡಿದ್ದ. ಆದೋ, ನಿಶ್ಯಬ್ಧ ಘಾಟಿಯಲ್ಲಿ ಕರ್ಣಕಠೋರವಾಗಿ ಕಿರಿಚಾಡುತ್ತಿತ್ತು. ಹಕ್ಕಿಗಳ ಇಂಚರ ಒತ್ತಟ್ಟಿಗಿರಲಿ, ನಾವು ಪರಸ್ಪರ ಮಾತಾಡಿಕೊಳ್ಳಲೂ, ಕೆಪ್ಪರಂತೆ ಅರಚಾಡತೂಡಗಿದೆವು.

ಇನ್ನು ಆ ಅಟ್ಟಣಿಗೆಯ ಅವ್ಯವಸ್ಥೆಯಂತೂ ಅಧ್ವಾನಮಯ. ಅರ್ಧಂಬಂರ್ಧ ರೂಪಿತವಾಗಿರುವ ಪಿಲ್ಲರ್ಗಳಿಂದ ಹೊರಹೊಮ್ಮಿರುವ ಬಿರುಸಾದ ಕಂಬಿಗಳು ಸೈನಿಕರ ಈಟಿಗಳಂತೆ ಸೆಟೆದು ನಿಂತಿವೆ. ಹಾಗೇ ಅಲ್ಲಿ ಮಳೆಯನೀರೂ ಕೂಡ ಬಿದ್ದೂ, ಬಿದ್ದೂ, ಅಸಾಧ್ಯ ಪಾಚಿಯೂ ಬೇರೆ ಮಡುಗಟ್ಟಿ ನಿಂತಿದೆ. ಅಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು.! ಒಂದು ವೇಳೆ ಆಯ ತಪ್ಪಿ ಜಾರಿ ಬಿದ್ದಿರೋ ಮುಗಿದೇ ಹೋಯಿತು. ಹಣೆ, ಕೈ,ಕಾಲುಗಳೆಲ್ಲಾ ಯದ್ವಾ-ತದ್ವಾ ಅಪ್ಪಚ್ಚಿಯಾಗುತ್ತವೆ. ಈ ಅನುಭವವೂ ನಮ್ಮಲ್ಲೇ ಒಬ್ಬರಿಗೆ ಆಗಿಯೂಹೋಯಿತು.

ಮೇಲಾಗಿ ಅದನ್ನು ಕಟ್ಟಿರುವ ರೀತಿಯೂ ತೀರಾ ಅವೈಜ್ಞಾನಿಕವಾಗಿದೆ, ಎನ್ನುತ್ತಾರೆ ಸ್ಥಳೀಯ ಜನ. ಉದ್ದಕ್ಕೆ ಸೇತುವೆ ಮಾದರಿಯಲ್ಲಿರುವ ಇಲ್ಲಿ ಹೆಚ್ಚೆಂದರೆ ಹತ್ತು-ಹದಿನೈದು ಮಂದಿ ಮಾತ್ರ ನಿಂತು ಸೂಯರ್ಾಸ್ತ ನೋಡಬಹುದಷ್ಟೆ. ಉಳಿದಂತೆ ಹಿಂದೆ ನಿಂತವರಿಗೆ ಕೇವಲ ಮುಂದೆ ನಿಂತವರ ಬೆನ್ನು ದರ್ಶನವಷ್ಟೇ ಸೌಭಾಗ್ಯ. ಹೀಗಾಗಿ, ಇದನ್ನು ಹ0ತಹ0ತವಾಗಿ ಅ0ದರೆ (ಣಜಠಿ ಛಥಿ ಣಜಠಿ) ಮೆಟ್ಟಿಲುಗಳ ರೀತಿಯಲ್ಲಿ ನಿಮರ್ಿಸುವುದು ಅತ್ಯಗತ್ಯವಾಗಿತೇನೋ? ಎ0ಬುದೇ ಬಹಳಷ್ಟು ಪ್ರವಾಸಿಗರ ಅನಿಸಿಕೆ.

ಇದಿಷ್ಟು ನಾವು ಅಲ್ಲಿ ಕಂಡ ಸಮಸ್ಯೆಗಳು ಅನ್ನೊದನ್ನ ಬಿಟ್ಟರೆ ಉಳಿದಂತೆ ಪ್ರಕೃತಿ ಸೃಷ್ಟಿಯ ಅತ್ಯ0ತ ಸುಂದರ ಸ್ಥಳ ಆಗುಂಬೆ. ಪಟ್ಟಣದ ದಣಿದ ಮನಸ್ಸುಗಳಿಗೆ ತಾಯಿಯ0ತೆ ಆಹ್ಲಾದ ತುಂಬುವ ಶಕ್ತಿ ಇಲ್ಲಿನ ಬೆಟ್ಟ-ಗುಡ್ಡಗಳಿಗಿದೆ. ಅದರಲ್ಲೂ, ನಿಮಗೆ ಬಿಡುವಿದ್ದು; ನಿಮ್ಮದೇ ಪ್ರಕೃತಿ ಪ್ರಿಯರ ಒ0ದು ಗೆಳೆಯರ ದಂಡಿದ್ದರೆ ಅವಶ್ಯ ಇಲ್ಲಿನ ಘಾಟಿಯನ್ನು ಸುತ್ತು ಹಾಕಲು ಬೇಗ ಬನ್ನಿ..ನೀವು ಬರುವುದು ಈ ಮಳೆಗಾಲದಲ್ಲೇ ಆದರೆ.. ಇನ್ನೂ ಬೇಗ ಬನ್ನಿ..,ತಡಮಾಡಬೇಡಿ ಘಾಟಿಯ,ಇಂಬಳಗಳು ನಿಮಗಾಗಿ ಶಬರಿಯಂತೆ ಕಾಯುತ್ತಿವೆ..!!

ಕಲೀಮ್ ಶಿವಮೊಗ್ಗ.

1 COMMENT

LEAVE A REPLY

Please enter your comment!
Please enter your name here

GET INSPIRED

We feature inspiring stories on Indian Travel, Art & Culture. Get our stories right into your mail box. Aie Shapat NO SPAMS!

Have a Story? Share it!